Dr. Muralee - 09845135787
Dr. Rajashree - 0945548807

ಸುರಕ್ಷಾ ದಂತ ಚಿಕಿತ್ಸಾಲಯ ದಂತ ಚಿಕಿತ್ಸೆಗೊಂದು ಸುರಕ್ಷಿತ ಹೆಸರು ಕಲಿಕೆ, ವೃತ್ತಿ, ಹಣ, ಸಂಪತ್ತು ಇವೆಲ್ಲಾ ಇಂದಿನ ಜಗತ್ತಿನ ವ್ಯಾಪಾರೀಕರಣಗೊಂಡ ಮುಖಗಳು. ಅದೇ ಬದುಕಾದರೆ…? ಬದುಕು ಬರಡಾಗುತ್ತ, ವ್ಯಾವಹಾರಿಕವಾಗಿ ಕೇವಲ ಲೌಕಿಕ ತೃಪ್ತಿಯೊಂದಿಗೆ ಮುಗಿದು ಹೋಗುವ ಪಯಣವಾಗುತ್ತದೆ. ಅದಲ್ಲ… ಅಷ್ಟೇ ಅಲ್ಲ… ಬದುಕಿನ ಮುಖಗಳು. ಅದಕ್ಕೆ ವ್ಯಾಪ್ತಿ, ಆಳ, ಎತ್ತರ ಇದೆ ಎನ್ನುವುದಾದರೆ ಅದನ್ನು ಮಾನವಿಕ ಬದುಕು ಎನ್ನಬಹುದು. ಸಾಕಷ್ಟು ಹಣ, ವೈಭವದ ಜೀವನ ನಡೆಸುವ ಎಲ್ಲಾ ಅವಕಾಶಗಳಿದ್ದರೂ ಕಲಿಕೆಯ ಜೀವನ ಮೌಲ್ಯಗಳನ್ನು ವೃತ್ತಿ ಮತ್ತು ಖಾಸಗೀ ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಬದ್ಧತೆಯಿಂದ ದುಡಿಯುವ, ವರ್ತಿಸುವ ಕೆಲವರನ್ನಾದರೂ ಪ್ರತಿ ಊರುಗಳಲ್ಲಿ ಕಾಣಬಹುದು. ಅಂತಹವರ ಸಾಲಿನಲ್ಲಿ ಗುರುತಿಸಬಹುದಾದ ಹೆಸರುಗಳಲ್ಲೊಂದು ಸುರಕ್ಷಾ ದಂತ ಚಿಕಿತ್ಸಾಲಯದ ಡಾ| ಮುರಲೀಮೋಹನ ಮತ್ತು ಡಾ| ರಾಜಶ್ರೀ ಮೋಹನ್ ದಂಪತಿಗಳು.

ಮಂಜೇಶ್ವರದ ಹೊಸಂಗಡಿಯಲ್ಲಿ ಡಾ|ಮುರಲೀಮೋಹನ ಚೂಂತಾರುರವರು ಆರಂಭಿಸಿದ ದಂತ ಚಿಕಿತ್ಸಾಲಯವೆ ‘ಸುರಕ್ಷಾ. ಅವರಿಗೆ ಹೆಗಲೆಣೆಯಾಗಿ ಹಾಥ್‌ನೊಂದಿಗೆ ಸಾಥ್ ನೀಡಿದವರು ಪತ್ನಿ ಡಾ|ರಾಜಶ್ರೀ ಮೋಹನ್‌ರವರು. ಕೇವಲ ಹಣ ಗಳಿಕೆಯ ದೃಷ್ಟಿಕೋನವಿರುತ್ತಿದ್ದರೆ ಊರಿಗೆ, ವೃತ್ತಿಗೆ ಜೊತೆಗೆ ತಮ್ಮ ವ್ಯಕ್ತಿತ್ವಕ್ಕೆ ಹೊಸ ರೂಪ ನೀಡಲು ಸಾಧ್ಯವಿರುತ್ತಿರಲಿಲ್ಲ. ಸೇವೆಯ ವಿಶಾಲಾರ್ಥದಲ್ಲಿ ಡಾ| ಮುರಲೀಮೋಹರವರು ತನ್ನ ದಂತ ಚಿಕಿತ್ಸಾಲಯಕ್ಕೆ ಸಾಂಸ್ಥಿಕ ರೂಪ ನೀಡಿ ಹೊಸಂಗಡಿಯ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಹೊಸ ಬೆಳಕ ನೀಡಿದವರು. ದಂತ ಚಿಕಿತ್ಸೆಗೆಂದು ಬರುವ ಜನರಲ್ಲಿ ಸುರಕ್ಷತೆಯ ಭಾವ ಭದ್ರವಾಗಿ ಬೇರೂರುವಂತೆ ಮಾಡಿ ಸುರಕ್ಷಾ ಎಂಬ ಹೆಸರನ್ನು ಅನ್ವರ್ಥವಾಗಿಸಿದ್ದಾರೆ.

15 ವರ್ಷಗಳ ಹಿಂದೆ ಅಂದರೆ 1997 ಜುಲಾ 3 ರಂದು 1 ದಂತ ಕುರ್ಚಿ ಮತ್ತು ದಂತ ಕ್ಷಕಿರಣ (x-ray) ವ್ಯವಸ್ಥೆ ಅಂದು ಸಚಿವರಾಗಿದ್ದ ಶ್ರೀ ಬಿ. ರಮಾನಾಥ ರೈಯವರಿಂದ ಉದ್ಘಾಟಿಸಲ್ಪಟ್ಟ ಸುರಕ್ಷಾ ದಂತ ಚಿಕಿತ್ಸಾಲಯವು ಇಂದು ವಿಸ್ತೃತವಾಗಿ, ಅತ್ಯಾಧುನಿಕ ವ್ಯವಸ್ಥೆ, ತಂತ್ರಜ್ಞಾಗಳೊಂದಿಗೆ ಬೆಳೆದ ಪರಿ ಯಾರನ್ನೇ ಆದರೂ ವಿಸ್ಮಿತರನ್ನಾಗಿಸದೆ ಇರದು. ಚಿಕಿತ್ಸೆಯ ಬೇಡಿಕೆಯ ಪೂರೈಕೆಯೊಂದಿಗೆ ಇದ್ದುದರಲ್ಲಿ ತೃಪ್ತಿಪಟ್ಟುಕೊಂಡು ಹಾಯಾಗಿರಬಹುದಿತ್ತು. ಆದರೆ ಡಾ| ಮುರಲೀಮೋಹನರು ಅದಕ್ಕೆ  ಅಂಟಿಕೊಳ್ಳುವ ಜಾಯಮಾನದವರಲ್ಲ. ಬಡತನದಲ್ಲಿ ಬೆಳೆದ ಹಳ್ಳಿಯ ಕನ್ನಡ ಮಾಧ್ಯಮ ಶಾಲೆಗಲ್ಲೇ ಓದಿದ ಹಿನ್ನೆಲೆ ಇವರದು. ಆ ಹಿನ್ನೆಲೆಯಲ್ಲಿ ತಾನೂ ಬೆಳೆಯುವುದರೊಂದಿಗೆ ಸಮಾಜದ ಏಳಿಗೆಯೂ ಮುಖ್ಯವೆಂದು ಪರಿಭಾವಿಸಿಕೊಂಡು ತನ್ನ್ನ ಚಿಕಿತ್ಸಾಲಯವನ್ನು ಕಾಲಕಾಲಕ್ಕೆ ಅಭಿವೃದ್ಧಿ ಪಡಿಸಿಕೊಂಡು ವಿಸ್ತೃತಗೊಳಿಸಿದ್ದಾರೆ. ಇವರ ಚಿಕಿತ್ಸಾಲಯದಲ್ಲಿ ಏನಿದೆ…? ಎಂದು ಪ್ರಶ್ನಿಸಬೇಡಿ. ಬಾಯಿ ಮತ್ತು ದಂತಕ್ಕೆ ಸಂಬಂಧಿಸಿದ ಯಾವ ಚಿಕಿತ್ಸೆ ಬೇಕಾಗಿದೆ ಎಂದು ವಿಚಾರಿಸಿ.

ಹಂತಹಂತವಾಗಿ ಉನ್ನತಿಗೊಂಡ ಸುರಕ್ಷಾ ಚಿಕಿತ್ಸಾಲಯದಲ್ಲಿ ಇದೀಗ 10 ದಂತ ಚಿಕಿತ್ಸೆಗೊದಗುವ ಕುರ್ಚಿಗಳು, ದಂತ ಕ್ಷಕಿರಣ ಯಂತ್ರ, ದಂತ ಇಂಪ್ಲಾಂಟ್ ವಿಭಾಗದೊಂದಿಗೆ ಅತ್ಯಾಧುನಿಕವಾಗಿ ನವೀಕರಣಗೊಂಡು ಜನರ ಸೇವೆಗೆ ಸದಾ ಸನ್ನದ್ಧವಾಗಿದೆ. ಇಂತಹ ನವೀಕೃತ ಮತ್ತು ವಿಸ್ತೃತ ವಿಭಾಗವು 2007ರಲ್ಲಿ ಉದ್ಘಾಟನೆಯಾಗಿದ್ದು ಅದನ್ನು ನೆರವೇರಿಸಿದವರೂ ಅಂದು ಸಚಿವರಾಗಿ ಉದ್ಘಾಟಿಸಿದ್ದ ಇಂದೂ ಸಚಿವರಾಗಿರುವ ಶ್ರೀ ಬಿ.ರಮಾನಾಥ ರೈವರು ಎಂಬುದು ಉಲ್ಲೇಖನೀಯ. ಸೇವೆ, ನಗು ಮತ್ತು ಆರೋಗ್ಯ (Servie Smile Wealth) ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಗಡಿನಾಡಿನ ಮತ್ತು ಒಳನಾಡಿನ ಎಲ್ಲರ ದಂತ ಸಂಬಂಧಿ ಸಕಲ ಕಾಯಿಲೆಗಳಿಗೆ ಪರಿಹಾರ ಹುಡುಕುವಲ್ಲಿ ‘ಸುರಕ್ಷಾ ದಂತ ಚಿಕಿತ್ಸಾಲಯವು ಮುಂಚೂಣಿಯಲ್ಲಿದೆ. ಮಕ್ಕಳ ಹಲ್ಲಿನ ತಜ್ಞರು, ಹಲ್ಲಿನ ವಸಡು ತಜ್ಞರು, ಬೇರುನಾಳ ತಜ್ಞರು, ವಕ್ರದಂತ ತಜ್ಞರು ಹೀಗೆ ದಂತ ಸ್ನಾತಕೋತ್ತರ ವಿಭಾಗದ ಎಲ್ಲ ವೈದ್ಯರುಗಳ ಸೇವೆಯನ್ನು ಮಾನವೀಯ ಕಳಕಳಿಯೊಂದಿಗೆ ಸೇವೆ ನೀಡುವ ದಂತ ವೈದ್ಯ ದಂಪತಿಗಳ ಪ್ರಾಮಾಣಿಕ ಪ್ರಯತ್ನ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಬಿಡುವಿಲ್ಲದ, ದಣಿವರಿಯದ ದುಡಿಮೆ ಇವರದು. ತನ್ನ ತಾಯಿಯವರ ನೆನಪಿನಲ್ಲಿ ‘ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾವನ್ನು ಸ್ಥಾಪಿಸಿಕೊಂಡು ಪ್ರತಿಷ್ಠಾನದ ಹೆರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಚಿತ ದಂತ ಚಿಕಿತ್ಸೆ ಮತ್ತು ರಕ್ತದಾನದ ನೂರಾರು ಶಿಬಿರಗಳನ್ನು ನಡೆಸಿಕೊಟ್ಟ ಸೇವಾ ದಾಖಲೆ ಸುರಕ್ಷಾ ದಂತ
ಚಿಕಿತ್ಸಾಲಯದ್ದು.

ಗಡಿನಾಡಿನಲ್ಲಿ ಕನ್ನಡದ ಕಂಪನ್ನು ಸೇವೆಯ ರೂಪದಲ್ಲಿ ವೃತ್ತಿಯ ಪಾವಿತ್ರ್ಯ ಮತ್ತು ಗೌರವವನ್ನು ಎತ್ತರಿಸಿಕೊಂಡು ತಮ್ಮ ವ್ಯಕ್ತಿvಕ್ಕೆ ಮೆರುಗು ತಂದುಕೊಂಡ ಡಾ| ಮುರಲೀ ಮೋಹನ ಚೂಂತಾರು ಮತ್ತು ಡಾ| ರಾಜಶ್ರೀ ಮೋಹನ್ ವೈದ್ಯ ದಂಪತಿಯವರ ದಂತ ಸೇವೆಯ ಜುಗಲ್‌ಬಂದಿ ಹೀಗೆ ಮುಂದುವರಿದಲ್ಲಿ ಗಡಿನಾಡ ಕನ್ನಡಿಗರ ಶುಕ್ರದಂತ ಇನ್ನಷ್ಟು ಹೊಳೆಯುವುದರಲ್ಲಿ ಸಂಶಯವಿಲ್ಲ.  ವೃತ್ತಿ, ಪ್ರವೃತ್ತಿಯ ಜೊತೆಜೊತೆಗೆ ದಂತ ವಿಜ್ಞಾದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿಕೊಂಡಿರುವ ಡಾ| ಮುರಲೀಮೋಹರು ದಂತ ವಿಜ್ಞಾಕ್ಕೆ ಸಂಬಂಧಿಸಿದಂತೆ ದೇಶ-ವಿದೇಶಗಲ್ಲಿ ಜರಗಿದ ಹಲವು ಅಂತರರಾಷ್ಟ್ರೀಯಸಮ್ಮೇಳಗಳಲ್ಲಿ ವಿಚಾರ ಮಂಡಿಸಿ ದಂತ ವೈದ್ಯಕೀಯ ಲೋಕದ ಸಂಗತಿಗಳಲ್ಲಿ ತನ್ನ ಪ್ರೌಢಿಮೆಯನ್ನೂ ಮೆರೆದಿರುವುದನ್ನು ಇಲ್ಲಿ ನೆಪಿಸಿಕೊಳ್ಳಬಹುದು. ಹೀಗೆ ಅಧ್ಯಯನ -ಸೇವೆಯೊಂದಿಗೆ ಇವರ ದಂತ ವೃತ್ತಿಯ ‘ಸೇವೆಯ ಜೊತೆಯಾಟ ಸದಾ ಮುದುವರಿಯಲಿ ಎಂದು ಆಶಿಸೋಣ.

(ಸುರಕ್ಷಾ ದಂತ ಚಿಕಿತ್ಸಾಲಯ ರಿಫಾ ಸೆಂಟರ್ ಹೊಸಂಗಡಿ ಮಂಜೇಶ್ವರ – 691323 )