ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಅಂಗವಾಗಿ ಮಾರ್ಚ್ 20ರಂದು ಕೊಂಚಾಡಿಯ ಶ್ರೀ ರಾಮಾಶ್ರಮ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ದಂತ ಆರೋಗ್ಯ ಮಾಹಿತಿ ಶಿಬಿರ ಜರುಗಿತು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ವತಿಯಿಂದ ಈ ಮಾಹಿತಿ ಶಿಬಿರ ನಡೆಯಿತು.
ಪ್ರತಿಷ್ಠಾನದ ಕಾರ್ಯದರ್ಶಿಯಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಶಾಲಾ ಶಿಕ್ಷಕ, ಶಿಕ್ಷಕಿಯರು ಮತ್ತು ಮಕ್ಕಳಿಗೆ ದಂತ ಆರೋಗ್ಯದ ರಕ್ಷಣೆ ಹಾಗೂ ಹಲ್ಲಿನ ಸ್ವಾಸ್ಥ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಬಾಯಿ ನಮ್ಮ ದೇಹದ ಹೆಬ್ಬಾಗಿಲು ಇದ್ದಂತೆ. ದೇಹದಲ್ಲಿನ ಆರೋಗ್ಯದ ಏರುಪೇರು ಬಾಯಿಯಲ್ಲಿ ಕಂಡು ಬರುತ್ತದೆ. ಆರೋಗ್ಯವಂತ ಬಾಯಿ ಮತ್ತು ಸದೃಢವಾದ ಹಲ್ಲುಗಳು ದೇಹದ ಆರೋಗ್ಯಕ್ಕೆ ಅತೀ ಅಗತ್ಯ. ಆರೋಗ್ಯದಂಥ ಬಾಯಿ ದೇಹದ ಆರೋಗ್ಯದ ಕನ್ನಡಿ ಎಂದು ಅಭಿಪ್ರಾಯ ಪಟ್ಟರು.
ಮಾಹಿತಿ ಶಿಬಿರದ ಬಳಿಕ ಶಾಲಾ ಗ್ರಂಥಾಲಯಕ್ಕೆ ಹಾಗೂ ಶಾಲಾ ಶಿಕ್ಷಕ ಶಿಕ್ಷಕಿಯರಿಗೆ ದಂತ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇರುವ “ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ” ಪುಸ್ತಕವನ್ನು ಉಚಿತವಾಗಿ ಹಂಚಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುರೇಶ್ ರಾವ್ ಇವರು ಉಪಸ್ಥಿತರಿದ್ದರು. ಸುಮಾರು 150 ಮಂದಿ ಮಕ್ಕಳು ಈ ಶಿಬಿರದ ಪ್ರಯೋಜನ ಪಡೆದರು.
No Comment
You can post first response comment.