“ರಾಷ್ಟ್ರೀಯ ದಂತ ವೈದ್ಯರ ದಿನ ಮಾರ್ಚ್ 6” ಇದರ ಅಂಗವಾಗಿ ನಗರದ ಗೋರಿಗುಡ್ಡದಲ್ಲಿರುವ ಕಿಟ್ಟೆಲ್ ಮೆಮೋರಿಯಲ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಂತ ಆರೋಗ್ಯದ ಬಗ್ಗೆ ಮಾಹಿತಿ ಶಿಬಿರ ದಿನಾಂಕ : 06-03-2018ನೇ ಮಂಗಳವಾರದಂದು ನಡೆಯಿತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಮುರಲೀ ಮೋಹನ್ ಚೂಂತಾರು ಭಾಗವಹಿಸಿದ್ದರು.
ಮಕ್ಕಳಿಗೆ ಹಲ್ಲಿನ ಆರೋಗ್ಯದ ರಕ್ಷಣೆಯ ಬಗ್ಗೆ, ಹಲ್ಲುಜ್ಜುವ ವಿಧಾನದ ಬಗೆ ಮತ್ತು ದಂತ ಚೂರ್ಣದ ಬಗೆಗಿನ ಮಾಹಿತಿಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಇದರ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು. ಡಾ|| ಚೂಂತಾರು ಅವರು ಮಾತನಾಡುತ್ತಾ ಹಾಲು ಹಲ್ಲಿಗೆ ಶಾಶ್ವತ ಹಲ್ಲಿನಷ್ಟೇ ಪ್ರಾಮುಖ್ಯತೆ ನೀಡಬೇಕು. ಏನಿದ್ದರೂ ಬಿದ್ದು ಹೋಗುವ ಹಲ್ಲು ಎಂದು ಅಸಡ್ಡೆ ತೋರಬಾರದು ಎಂದು ಮಕ್ಕಳಿಗೆ ಮತ್ತು ಹೆತ್ತವರಿಗೆ ಕಿವಿಮಾತು ಹೇಳಿದರು.
ದಂತ ಆರೋಗ್ಯ ಚೆನ್ನಾಗಿದ್ದಲ್ಲಿ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ, ದೈಹಿಕ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಕರೆ ನೀಡಿದರು. ಶಾಲಾ ಕನ್ನಡ ಶಿಕ್ಷಕರಾದ ಶ್ರೀ ಕೃಷ್ಣ ನೀರಮೂಲೆ ಇವರು ಕಾರ್ಯಕ್ರಮ ನಿರ್ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾರು 50 ಮಂದಿ ಮಕ್ಕಳು ಮತ್ತು ಹೆತ್ತವರು ಈ ಕಾರ್ಯಕ್ರಮದ ಸದುಪಯೋಗ ಪಡೆದರು.
No Comment
You can post first response comment.