Dr. Muralee - 09845135787
Dr. Rajashree - 0945548807


ನಮ್ಮ ದೇಹದ ಮೂಳೆಗಳು ಬಹಳ ಶಕ್ತಿಶಾಲಿಯಾದ ಅಂಗವಾಗಿದೆ. ದೇಹದ ಚಲನೆಗೆ ಬೇಕಾದ ಭದ್ರತೆಯನ್ನು ನೀಡುವುದು ಈ ಎಲುಬುಗಳೇ ಆಗಿರುತ್ತದೆ. ಈ ಎಲುಬುಗಳು ಸಾಮಾನ್ಯವಾಗಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಕೋಲ್ಯಾಜನ್ ಮುಂತಾದವುಗಳಿಂದ ಮಾಡಲ್ಪಟ್ಟಿದೆ. ಸಣ್ಣ ಮಕ್ಕಳಲ್ಲಿ ಎಲುಬು ಬಹಳ ಮೃದುವಾಗಿರುತ್ತದೆ ಮತ್ತು ಕೊಲ್ಯಾಜನ್ ಅಂಶ ಜಾಸ್ತಿ ಇರುತ್ತದೆ. ಮತ್ತು ಬಹಳ ಬೇಗ ಮುರಿಯುದಿಲ್ಲ. ಎಲುಬು ಬೆಂಡಾಗುತ್ತದೆಯೇ (ಬಾಗುವುದು) ಹೊರತು ತುಂಡಾಗುವ ಸಾಧ್ಯತೆ ಕಡಮೆ ಇರುತ್ತದೆ. ವಯಸ್ಸಾದಂತೆಲ್ಲಾ ಎಲುಬಿನ ಸಾಂದ್ರತೆ ಹೆಚ್ಚುತ್ತಲೇ ಹೋಗುತ್ತದೆ. ಸುಮಾರು 30ರಿಂದ 35 ವರ್ಷದ ಹೊತ್ತಿಗೆ ಎಲುಬಿನ ಸಾಂದ್ರತೆ ಒಂದು ಮಿತಿಯನ್ನು ತಲುಪಿ, ಗರಿಷ್ಠ ಸಾಂದ್ರತೆ ಹೊಂದುತ್ತದೆ. ದೇಹದಲ್ಲಿನ ರಸದೂತಗಳು ಪ್ರಮುಖವಾಗಿ ಈ ಎಲುಬಿನ ಸಾಂದ್ರತೆಯನ್ನು ನಿಯಂತ್ರಿಸುತ್ತದೆ. ಇದರ ಜೊತೆಗೆ ನಾವು ತಿನ್ನುವ ಆಹಾರ, ನಮ್ಮ ಆಹಾರದಲ್ಲಿನ ಕ್ಯಾಲ್ಸಿಯಂ ಪ್ರಮಾಣ, ನಮ್ಮ ಜೀವನಶೈಲಿ, ನಾವು ಸೇವಿಸುವ ಔಷಧಿ ಇವೆಲ್ಲವೂ ಎಲುಬಿನ ಸಾಂದ್ರತೆ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ. ಇದರ ಜೊತೆಗೆ ಅನುವಂಶೀಯ ಕಾರಣಗಳು, ದೈಹಿಕ ವ್ಯಾಯಾಮದ ಕೊರತೆ, ವಿಟಮಿನ್ ಡಿ ಕೊರತೆ, ಧೂಮಪಾನ, ಮದ್ಯಪಾನ, ಅತಿಯಾದ ಸ್ಥಿರಾಯ್ಡು ಸೇವನೆ, ಮಹಿಳೆಯರಲ್ಲಿ ಋುತು ಚಕ್ರ ಹತೋಟಿಯಲ್ಲಿಡುವ ಔಷಧಿಗಳ ಅತಿಯಾದ ಸೇವನೆ, ಗರ್ಭ ನಿರೋಧಕ ಔಷಧಿಗಳ ಅನಗತ್ಯ ಸೇವನೆ ಇವೆಲ್ಲವೂ ದೇಹದಲ್ಲಿ ಎಲುಬಿನ ಸಾಂದ್ರತೆಯನ್ನು ಕಡಮೆ ಮಾಡಿ ಎಲುಬನ್ನು ಹೆಚ್ಚು ಟೊಳ್ಳು ಮಾಡಿ ಟೊಳ್ಳು ಮೂಳೆ ರೋಗಕ್ಕೆ ನಾಂದಿ ಹಾಡುತ್ತದೆ. 40 ವರ್ಷದ ಬಳಿಕ ಎಲುಬಿನ ಸಾಂದ್ರತೆ ಕುಸಿಯುತ್ತಲೇ ಬರುತ್ತದೆ. ಪುರುಷರಲ್ಲಿ ವರ್ಷಕ್ಕೆ 0.5 ಶೇಕಡಾದಷ್ಟು ಕುಸಿಯುತ್ತದೆ ಮತ್ತು ಮಹಿಳೆಯರಲ್ಲಿ ಋುತುಬಂಧದ ಬಳಿಕ ವರ್ಷಕ್ಕೆ 5 ಶೇಕಡಾದಷ್ಟು ಎಲುಬಿನ ಸಾಂದ್ರತೆ ಕುಸಿಯುತ್ತದೆ. ಋುತು ಬಂಧದ ಬಳಿಕ 50 ವರ್ಷದ ದಾಟಿದ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ಈ ಟೊಳ್ಳು ಮೂಳೆ ರೋಗಕ್ಕೆ ತುತ್ತಾಗುತ್ತಾರೆ ಎಂದು ವಿಶ್ವ ಸಂಸ್ಥೆಯ ವರದಿಯಲ್ಲಿ ತಿಳಿಸಿದೆ.

ಏನಿದು ಡೆಕ್ಸಾ ಸ್ಕ್ಯಾನಿಂಗ್?

ಎಲುಬಿನ ಸಾಂದ್ರತೆಯನ್ನು ಪತ್ತೆ ಹಚ್ಚುವ ಪ್ರಕ್ರಿಯೆಗೆ ಡೆಕ್ಸಾ ಸ್ಕ್ಯಾನಿಂಗ್ ಎನ್ನುತ್ತಾರೆ. ಆಂಗ್ಲಭಾಷೆಯಲ್ಲಿ DEXA (Dual Energy X-ray Absorptimetry) ಸ್ಕ್ಯಾನಿಂಗ್ ಎಮದು ಕರೆಯುತ್ತಾರೆ. ಇದೊಂದು ಬಹಳ ಸುಲಭವಾದ ಮತ್ತು ನಿಖರವಾದ ಪರೀಕ್ಷೆಯಾಗಿದ್ದು, ಇದರ ಮುಖಾಂತರ ಎಲುಬಿನ ಸಾಂದ್ರತೆಯನ್ನು ಪತ್ತೆ ಹಚ್ಚುತ್ತಾರೆ. ಕೇವಲ 10ರಿಂದ 15 ನಿಮಿಷಗಳಲ್ಲಿ ಈ ಪರೀಕ್ಷೆ ಮುಗಿದು ಹೋಗುತ್ತದೆ. ನೋವಿಲ್ಲದ ಪರೀಕ್ಷೆ ಇದಾಗಿದ್ದು ಕ್ಷ-ಕಿರಣಕ್ಕೆ ಬಳಸುವ ರೇಡಿಯೇಷನ್ ಡೋಸ್ ಕೂಡಾ ಬಹಳ ಕನಿಷ್ಠ ಪ್ರಮಾಣದಲ್ಲಿರುತ್ತದೆ. ಯಾವ ವ್ಯಕ್ತಿ ಮೂಳೆ ಮುರಿತಕ್ಕೆ ತುತ್ತಾಗುವ ಸಾಧ್ಯತೆ ಇದೆ, ಎಂಬುದನ್ನು ಬಹಳ ನಿಖರವಾಗಿ ಪತ್ತೆ ಹಚ್ಚಲಾಗುತ್ತದೆ.

ಯಾರು ಈ ಪರೀಕ್ಷೆ ಮಾಡಿಸಬೇಕು?

1. ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ 35ರ ವಯಸ್ಸಿನಲ್ಲಿ ಒಮ್ಮೆ ಡೆಕ್ಸಾ ಸ್ಕ್ಯಾನಿಂಗ್ ಮಾಡಿಸಬೇಕು. ಆ ಮೂಲಕ ಎಲುಬಿನ ಸಾಂದ್ರತೆ ತಿಳಿದಲ್ಲಿ, ಮುಂದೆ ಉಂಟಾಗುವ ಮೂಳೆ ಸವೆತದ ಪ್ರಮಾಣವನ್ನು ಈ ಸ್ಕ್ಯಾನ್‍ಗೆ ಹೋಲಿಸಿ ತಾಳೆ ಹಾಕಲು ಅನುಕೂಲವಾಗುತ್ತದೆ.

2. ಮಹಿಳೆಯರು ಋುತುಬಂಧದ ಬಳಿಕ, 50 ವರ್ಷದ ಬಳಿಕ ಪ್ರತಿ 2 ವರ್ಷದಲ್ಲಿ ಒಮ್ಮೆ ಈ ಸ್ಕ್ಯಾನ್ ಮಾಡಿಸುವುದು ಉತ್ತಮ.

3. ಅತಿಯಾದ ಮದ್ಯಪಾನಿಗಳು ಮತ್ತು ಧೂಮಪಾನಿಗಳು 50 ವರ್ಷವಾದ ಬಳಿಕ ಕಡ್ಡಾಯವಾಗಿ ಮಾಡಿಸಬೇಕು.

4. ಕುಟುಂಬದಲ್ಲಿ ತಂದೆ ತಾಯಂದಿರು ಟೊಳ್ಳು ಮೂಳೆ ರೋಗದಿಂದ ಬಳಲಿದ್ದಲ್ಲಿ, ಮಕ್ಕಳಿಗೂ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ 50 ವಯಸ್ಸಿನ ಬಳಿಕ ಎಲ್ಲರೂ ಮಾಡಿಸಬಹುದು.

5. ಅತಿಯಾದ ಸ್ಥಿರಾಯ್ಡು ಸೇವನೆ, ದೀರ್ಘಾಕಾಲಿಕ ನೋವು ನಿವಾರಕ ಔಷಧಿ ಸೇವನೆ ಸ್ಥಿರಾಯ್ಡು ಸೇವನೆ ಮತ್ತು ಗರ್ಭ ನಿರೋಧಕ ಔಷಧಿ ಬಳಸುವವರು ಕಡ್ಡಾಯವಾಗಿ ಈ ಡೆಕ್ಸಾ ಸ್ಕ್ಯಾನ್ ಮಾಡಿಸಬೇಕು.

6. ಮಹಿಳೆಯರಲ್ಲಿ 45ರ ಮೊದಲು ಋುತುಬಂಧವಾಗಿದ್ದಲ್ಲಿ ಮತ್ತು 45 ವರ್ಷದ ಮೊದಲು ಗರ್ಭಕೋಶ ತೆಗೆಸಿಕೊಂಡಿದ್ದಲ್ಲಿ ಡೆಕ್ಸಾ ಸ್ಕ್ಯಾನ್ ಮಾಡಿಸಬೇಕು. ಇಂತಹಾ ಮಹಿಳೆಯರಲ್ಲಿ ರಸದೂತಗಳ ವೈಫರೀತ್ಯ ಅತಿಯಾಗಿರುತ್ತದೆ.

ಹೇಗೆ ಮಾಡುತ್ತಾರೆ :
ರೋಗಿಯ ಎತ್ತರ, ತೂಕ ಮತ್ತು ವಯಸ್ಸನ್ನು ಗುರುತಿಸಿಗೊಂಡು ವ್ಯಕ್ತಿಯ ಸ್ಕಾನ್ ಮಾಡಲಾಗುತ್ತದೆ. ಈ ಇತರ ಅಖಿ ಸ್ಕ್ಯಾನ್‍ಗಳಂತೆ ಈ ಸ್ಕ್ಯಾನ್ ಮಾಡುವಾಗ ದೇಹದ ಬಟ್ಟೆ ತೆಗೆಯುದಿಲ್ಲ. ಕುತ್ತಿಗೆ ಮತ್ತು ಬೆನ್ನಿನ ಭಾಗದ ಎಲುಬು ಹಾಗೂ ಸೊಂಟದ ಎಲುಬಿನ ಸಾಂದ್ರತೆಯನ್ನು ನಿಖರವಾಗಿ ಅಳೆಯುತ್ತದೆ. ಗರ್ಭಿಣಿಯರಲ್ಲಿ ಈ ಡೆಕ್ಸಾ ಸ್ಕ್ಯಾನ್ ಮಾಡುವುದಿಲ್ಲ. ಅದೇ ರೀತಿ ಹಿಂದೆ ಎಲುಬಿನ ಮುರಿತವಾಗಿ ಎಲುಬಿನಲ್ಲಿ ಲೋಹದ ಸ್ಕ್ರೂ ಮತ್ತು ಪ್ಲೇಟ್ ಇದ್ದಲ್ಲಿ ಈ ಸ್ಕ್ಯಾನ್ ಫಲಿತಾಂಶ ಸರಿಯಾಗಿ ಬರುವುದಿಲ್ಲ. ಎಲುಬಿನ ಸಾಂದ್ರತೆಯನ್ನು ಖಿ-ಸ್ಟೋರ್‍ನಲ್ಲಿ ಮಾಪನ ಮಾಡುತ್ತಾರೆ. ಮೈನಸ್ ಒಂದಕ್ಕಿಂತ ಜಾಸ್ತಿ ಇದ್ದಲ್ಲಿ ಉತ್ತಮ. ಎಲುಬಿನ ಸಾಂದ್ರತೆ ಮೈನಸ್ ಒಂದರಿಂದ ಮೈನಸ್ 2.5 ಇದ್ದಲ್ಲಿ ಎಲುಬಿನ ಸಾಂದ್ರತೆ ಕಡಮೆ ಎಂದು ತೀರ್ಮಾನಿಸುತ್ತಾರೆ. ಮೈನಸ್ 2.5ಕ್ಕಿಂತಲೂ ಕಡಮೆ ನಿಮ್ಮ ಖಿ ಸ್ಟೋರ್ ಇದ್ದಲ್ಲಿ ನೀವು ಮೂಳೆರಂದ್ರತೆ ರೋಗದಿಂದ ಬಳುತ್ತಿದ್ದೀರಿ ಎಂದು ತಿರ್ಮಾನಿಸಲಾಗುತ್ತದೆ.

ಕೊನೆ ಮಾತು :

ಅಸ್ಥಿರಂದ್ರತೆ, ಮೂಳೆರಂದ್ರತೆ, ನಿಶ್ವಬ್ಧರೋಗ, ಟೊಳ್ಳು ಮೂಳೆ ರೋಗ ಎಂದು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತವೆ. ಈ ರೋಗವನ್ನು ಆಂಗ್ಲಭಾಷೆಯಲ್ಲಿ ಆಸ್ಟಿಯೋ ಪೋರೋಸಿಸ್‍ನ್ ಎಂದೂ ಕರೆಯುತ್ತಾರೆ. ಮಹಿಳೆಯರಲ್ಲಿ ಎಲುಬಿನ ಸಾಂದ್ರತೆ ಪುರುಷರಿಗಿಂತ ಕಡಮೆ ಇರುತ್ತದೆ. ಮಹಿಳೆಯರಲ್ಲಿ ಈಸ್ಟ್ರೊಜನ್ ರಸದೂತವು ಮೂಳೆಯ ಸಾಂದ್ರತೆಯನ್ನು ಗರಿಷ್ಠ ಮಟ್ಟದಲ್ಲಿ ಇಡಲು ಸಹಕರಿಸುತ್ತದೆ. ಆದರೆ ಋುತುಬಂಧದ ಬಳಿಕ, ಈ ಈಸ್ಟ್ರೊಜನ್ ರಸದೂತದ ಪ್ರಮಾಣ ವೇಗವಾಗಿ ಕುಸಿಯುತ್ತದೆ ಮತ್ತು ಈ ಕಾರಣದಿಂದಲೇ ಮೂಳೆಯ ಸಾಂದ್ರತೆಯೂ ವೇಗವಾಗಿ ಕುಸಿಯುತ್ತದೆ. ಈ ಕಾರಣದಿಂದಲೇ ಮಹಿಳೆಯರು ಪುರುಷರಿಗಿಂತ ಜಾಸ್ತಿ ವೇಗವಾಗಿ ಟೊಳ್ಳು ಮೂಳೆ ರೋಗಕ್ಕೆ ತುತ್ತಾಗುತ್ತಾರೆ. ಋುತುಬಂಧದ ಬಳಿಕ ಎಲ್ಲಾ ಮಹಿಳೆಯರೂ ಕಡ್ಡಾಯವಾಗಿ ಈ ಡೆಕ್ಸಾ ಸ್ಕ್ಯಾನ್ ಮಾಡಿಸತಕ್ಕದ್ದು. ಈ ಮೂಳೆರಂದ್ರತೆ ರೋಗ ಒಂದು ನಿಶ್ಯಬ್ಧವಾದ ವ್ಯಾದಿಯಾಗಿದ್ದು, ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದೆ ತನ್ನಿಂತಾನೇ ಮೂಳೆಗಳು ಮುರಿತಕ್ಕೊಳಗಾಗುತ್ತದೆ. ಬೆನ್ನಮೂಳೆ ಮುಂಗೈ ಮೂಳೆ ಸೊಂಟದ ಮೂಳೆಗಳು ಹೆಚ್ಚಾಗಿ ಮುರಿತಕ್ಕೆ ಒಳಗಾಗುತ್ತದೆ. ಸಾಕಷ್ಟು ಮುಂಜಾಗರೂಕತೆ ವಹಿಸಿ ಸೂಕ್ತವಾದ ಆಹಾರ, ನಿರಂತರ ದೈಹಿಕ ವ್ಯಾಯಾಮ, ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇವಿಸಿ, ಧೂಮಪಾನ ಮತ್ತು ಮದ್ಯಪಾನ ರಹಿತ ಜೀವನ ಶೈಲಿ ಅಳವಡಿಸಿಕೊಂಡಲ್ಲಿ ಈ ಟೊಳ್ಳು ಮೂಳೆ ರೋಗವನ್ನು ಆರಂಭದಲ್ಲಿಯೇ ನಿವಾಳಿಸಿ ಹಾಕಬಹುದು ಮತ್ತು ಅದರಲ್ಲಿಯೇ ಮನುಕುಲದ ಒಳಿತು ಅಡಗಿದೆ.

About Author

You may also like

No Comment

You can post first response comment.

Leave A Comment

Please enter your name. Please enter an valid email address. Please enter a message.